HKE Society's Boys High School, Kalaburagi

An institute of
H. K. E. Society, Kalaburagi

☰ MENU

About School

1984 ರಲ್ಲಿ ಸ್ಥಾಪನೆಗೊಂಡ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ತೆಯ ಬಾಲಕರ ಪ್ರೌಢ ಶಾಲೆಯು ಬೆಳೆದು ಬಂದು ಒಂದು ನೋಟ. ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಅನೇಕ ಕಾಲೇಜುಗಳು ಉತ್ತಮ ಶಿಕ್ಷಣ ನೀಡುತ್ತಾ ಬಂದಿದ್ದು, 1984-85ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬೀದರ ಶಾಲೆ ಒಳಗೊಂಡಂತೆ ಒಟ್ಟು ಮೂರು ಶಾಲೆಗಳು ಪ್ರಾರಂಭಗೊಂಡವು. ಮೂರು ಶಾಲೆಗಳ ಪೈಕಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಾಲಕರ ಪ್ರೌಢ ಶಾಲೆಯೂ ಒಂದಾಗಿದೆ. ಕೇವಲ 17 ವಿದ್ಯಾರ್ಥಿಗಳೊಂದಿಗೆ 8ನೇ ತರಗತಿ ಆರಂಭಗೊಂಡನಂತರ ಕ್ರಮೇಣ 9ನೇ ಮತ್ತು 10ನೇ ತರಗತಿಗಳಿಗಾಗಿ ವಿದ್ಯಾರ್ಥಿಗಳ ಪ್ರವೇಶ ಗಣನೀಯವಾಗಿ ಹೆಚ್ಚುತ್ತಾ ಇಂದು 170 ವಿದ್ಯಾರ್ಥಿಗಳು ಅಭ್ಯಾಸದಲ್ಲಿ ತೊಡಗಿದ್ದು ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಉತ್ತಮ ಸಾದನೆ ಮಾಡುತ್ತಾ ನಮ್ಮ ಶಾಲೆಯು ಇಂದುಉತ್ತರ ವಲಯದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದೆ. ಹೆಚ್ಚಾಗಿ ಗ್ರಾಮೀನ ಪ್ರದೇಸದಿಂದ ಹಾಗೂ ನಗರದಿಂದ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಕಾಯ್ದುಕೊಂಡಿದ್ದಾರೆ. ಶಾಲೆಯು 2001 ರಲ್ಲಿ ಅನುಧಾನಕ್ಕೆ ಒಳಪಟ್ಟಿದ್ದು, ನಂತರ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದೆ.

ಶಾಲೆಯಲ್ಲಿ ಅನುಭವ ಮತ್ತು ತರಬೇತಿ ಪಡೆದ ಶಿಕ್ಷಕ-ಶಿಕ್ಷಕಿಯರಿದ್ದು ಒಳ್ಳೆಯ ನಿμÉ್ಠಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪಠ್ಯ ಪುಸ್ತಕದ ಜೊತೆಯಲ್ಲಿಯೇ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದು ವಿದ್ಯಾರ್ಥಿಗಳಲ್ಲಿ ನೈತಿಕತೆ ಮೌಲ್ಯಗಳನ್ನು ಬೆಳೆಸಲು ಸಹಾಯಕವಾಗಿದೆ. ಎಲ್ಲಾ ವಿದ್ಯಾರ್ಥಿಗಳು ಪ್ರತಿಯೊಂದು ರಂಗದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದು, ಕ್ರೀಡೆಗಳಲ್ಲಿ, ವಿಜ್ಞಾನ ಕ್ಷೇತ್ರದಲ್ಲಿ, ಚಿತ್ರಕಲೆಯಲ್ಲಿ ಕನ್ನಡ, ಇಂಗ್ಲೀಷ ಭಾμÉಗಳಲ್ಲಿ ಸಾಮಾನ್ಯ ಜ್ಞಾನದಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಸರ್ಕಾರದ ವತಿಯಿಂದ ನಡೆಯುವ ಪ್ರತಿಭಾಕಾರಂಜಿಯಂತಹ ಚಟುವಟಿಕೆಗಳಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ಹೋಗಿದಲ್ಲದೆ ಹಲವಾರು ಶಾಲೆಗಳು ಸಂಘ-ಸಂಸ್ಥೆಗಳು ನಡೆಸುತ್ತಿರುವ ಚಟುವಟಿಕೆÀಗಳಲ್ಲಿ ಭಾಗವಹಿಸುತ್ತಾ ಸಂಸ್ಥೆಗೆ ಹಾಗೂ ಶಾಲೆಗೂ ಕೀರ್ತಿ ತಂದಿರುತ್ತಾರೆ. ಶ್ರೀಮಂತರಾವ ಜಗತ್ತೆ ಹಾಗೂ ಶ್ರೀಮತಿ ಎಸ್.ವಿ. ಮುದ್ದಾ ಅವರು ಮುಖ್ಯ ಗುರುಗಳಾಗಿ ಶಾಲೆಯ ಪ್ರಗತಿಯನ್ನು ಮಾಡಿರುತ್ತಾರೆ.

ಪ್ರಸ್ತುತ ಮುಖ್ಯ ಗುರುಗಳಾದ ಶ್ರೀ ಬಿ.ಎಂ. ಮಹೇಶ್ ಹಾಗೂ ಎಲ್ಲಾ ಶಿಕ್ಷಕ ಶಿಕ್ಷಕಿಯರು ಶಾಲೆಯ ಪ್ರಗತಿಯನ್ನು ಮುಂದುವರೆಸುತ್ತಾ ಇದ್ದಾರೆ. ಶಾಲೆಯೂ ವಿಶಿಷ್ಟವಾಗಿ ಬೆಳೆದು ಬರುವಂತೆ ಶಿಕ್ಷಕರನ್ನೆಲ್ಲಾ ಕ್ರಿಯಾಶೀಲರನ್ನಾಗಿ ಮಾಡಿ ಬೋಧನಾದಂತಹ ಪವಿತ್ರ ಕಾರ್ಯದಲ್ಲಿ ತೊಡಗಲು ಪ್ರೇರೆಪಿಸಿದ ಹೈದ್ರಾಬಾದ್À ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಉಪಾದ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಆಡಳಿತಾಧಿಕಾರಿಗಳು ಕಾರಣೀಭೂತರಾಗಿರುತ್ತಾರೆ ಎಂದು ಅತ್ಯಂತ ಸಂತಸದಿಂದ ಹೇಳಲು ಬಯಸುತ್ತೇನೆ.

ಧನ್ಯವಾದಗಳೊಂದಿಗೆ ಒಂದು ಚಿಕ್ಕ ವರದಿಯನ್ನು ಕಾರ್ಯಾಲಯಕ್ಕೆ ಸಲ್ಲಿಸುತ್ತಿದ್ದೆನೆ.

ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಗಿನ ಅಧ್ಯಕ್ಷÀರು ಶ್ರೀ ಬಿ.ಜಿ. ಜವಳಿ ಮತ್ತು ಸದಸ್ಯರಾದ ಶ್ರೀ ಗಣೇಶ ಅಣಕಲ್ ಅವರ ಆಸಕ್ತಿ ಮೇರೆಗೆ ಹೈ.ಕ. ಶಿ. ಸಂಸ್ಥೆಯ ಬಾಲಕರ ಪ್ರೌಢ ಶಾಲೆ 16ನವ್ಹೆಂಬರ್ 1984 ರಂದು ಪ್ರಾರಂಭವಾಯಿತು. ಈ ಶಾಲೆಯ ಮೊದಲ ಮುಖ್ಯೋಪಾಧ್ಯಾಯರು ಶ್ರೀಮಾನ ಶ್ರೀಮಂತರಾವ ಜಗತೆಯವರ ನೇತೃತ್ವದಲ್ಲಿ ಪ್ರಾರಂಭವಾಯಿತು. ಈ ಶಾಲೆ ಪ್ರಾರಂಭವಾದಾಗ ಕೇವಲ ಒಬ್ಬ ಶಿಕ್ಷಕಿ ಶ್ರೀಮತಿ ಉμÁ ಕೆ. ಗುರುರಾಜ ಮತ್ತು ಎ.ದ.ಗು. ಶ್ರೀ ಎಲ್.ಎ. ಪಾಟೀಲ ಮತ್ತು ಅಟೆಂಡರಾದ ಶ್ರೀ ಸ್ವಾಮಿ ಇವರು ಮತ್ತು 17 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ನಮ್ಮ ಶಾಲೆ ಇಂದು 9 ಜನ ಶಿಕ್ಷಕರು ಮತ್ತು 164 ವಿದ್ಯಾರ್ಥಿಗಳಿಂದ ಹೆಮ್ಮರವಾಗಿ ಬೆಳೆದಿದೆ. ಶ್ರೀ ಶ್ರೀಮಂತರಾವ ಜಗತೆಯವರು ಮುಖ್ಯೋಪಾಧ್ಯಾಯರಾಗಿ ನಮ್ಮ ಶಾಲೆಯ ಅಭಿವೃದ್ಧಿಗೆ ಕಾರಣಿಕರ್ತರಾಗಿದ್ದಾರೆ.

ದಿನಾಂಕ : 28.06.1987 ರಂದು ನಮ್ಮ ಶಾಲೆಯು ಅಯ್ಯರವಾಡಿಯ ಪ್ರದೇಶದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಆ ಕಟ್ಟಡ ಮಕ್ಕಳಿಗೆ ಕೂಡಲು ವಿಶಾಲವಾದ ಕೊಠಡಿ, ಆಟದ ಮೈದಾನ, 24 ಗಂಟೆ ನೀರಿನ ಸೌಲಭ್ಯದಿಂದ, ಗಿಡಮರಗಳಿಂದ ಕಂಗೊಳಿಸುತ್ತಿದೆ. ಇಂತಹ ಭವ್ಯ ಶಾಲೆಯ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಆಗಿನ ಕರ್ನಾಟಕ ರಾಜ್ಯದ ಸಚಿವರಾದ ಶ್ರೀ ಎಸ್.ಕೆ. ಕಾಂತಾ ಅವರ ಅಮೃತ ಹಸ್ತದಿಂದ ನೆರವೇರಿತು. ಈ ಕಾರ್ಯಕ್ರಮವು ಆಗಿನ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಸವರಾಜಪ್ಪಾ ಅಪ್ಪಾ ಅವರು ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಜಿ.ಡಿ. ಅಣಕಲ ಅವರ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. 1981 ರ ನಂತರ ನಮ್ಮ ಶಾಲೆಯು ಸ್ಪೂರ್ತಿಯ ಚಿಲುಮೆಯಾಗಿ ಹೊರ ಹೊಮ್ಮಿದೆ.

ಕ್ರಮೇಣ ನಮ್ಮ ಶಾಲೆ ಅಭಿವೃದ್ಧಿ ಹೊಂದುತ್ತ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸುತ್ತ ಬಂದಿದೆ. ನಮ್ಮ ಶಾಲೆಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಬಹಳ ಪೈಪೋಟಿ ನಡೆಯುತ್ತದೆ. ಆದರೆ ಶಾಲೆಯ ಮುಖ್ಯ ಗುರುಗಳು ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಮೂಲಕ ದಾಖಲಾತಿ ಮಾಡಿಕೊಳ್ಳುತ್ತಾರೆ. ನಮ್ಮ ಶಾಲೆಯು ವಿದ್ಯಾಕೇಂದ್ರದ ಆಕರ್ಷಣ ಬಿಂದುವಾಗಿದೆ. ಇದಕ್ಕೆ ಕಾರಣ ಇಲ್ಲಿನ ಎಲ್ಲ ವಿಷಯದ ಶಿಕ್ಷಕರು ಬಹಳ ನಿμÉ್ಠಯಿಂದ ಸೇವೆ ಸಲ್ಲಿಸುತ್ತಿರುವುದರಿಂದ ಹತ್ತನೇ ತರಗತಿಯ ಫಲಿತಾಂಶ ಗಣನೀಯವಾಗಿ ಪ್ರಗತಿ ಹೊಂದಿದೆ. ಅತ್ಯುತ್ತಮ ಅಂಕಗಳನ್ನು 3 ವಿದ್ಯಾರ್ಥಿಗಳಿಗೆ ಡಾ. ಬಸವರಾಜ ಕೊತಲಿಯವರು ಪ್ರತಿ ವರ್ಷವೂ ಪ್ರೋತ್ಸಾಹ ಧನ ಬಹುಮಾನದ ಮೂಲಕ ನೀಡುತ್ತಿದ್ದಾರೆ. ನಮ್ಮ ಶಾಲೆಯ ಪ್ರತಿಯೊಂದು ಕಾರ್ಯಕ್ರಮಕ್ಕೂ ಮುಖ್ಯ ಅತಿಥಿಗಳಾಗಿ ಆಗಮಿಸಿ ಶಿಕ್ಷಕರಿಗೂ ಮತ್ತು ವಿದ್ಯಾರ್ಥಿಗಳಿಗೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.

 

ಶಾಲಾ ಮಾಹಿತಿ


1. ಶಾಲೆಯ ಹೆಸರು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಾಲಕರ ಪ್ರೌಢ ಶಾಲೆ, ಅಯ್ಯರವಾಡಿ ಆಸೀಫ್ ಗಂಜ್, ಗುಲಬರ್ಗಾ
2. ಸ್ಥಾಪನೆಯ ವರ್ಷ 16-11-1984
3. ಶಾಲೆ ಸ್ಥಾಪನಾಧ್ಯಕ್ಷರು ಡಾ.ಬಿ.ಜಿ. ಜವಳಿಯವರು ಅಧ್ಯಕ್ಷರು, ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ, ಗುಲಬರ್ಗಾ
4. ಈಗಿನ ಅಧ್ಯಕ್ಷರು ಶ್ರೀ ಬಸವರಾಜ ಎಸ್. ಭೀಮಳ್ಳಿಯವರು ಅಧ್ಯಕ್ಷರು, ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ, ಗುಲಬರ್ಗಾ
5. ಶಿಕ್ಷಣ ಮಾಧ್ಯಮ ಕನ್ನಡ
6. ನಡೆಯುತ್ತಿರುವ ತರಗತಿಗಳು 8, 9 ಮತ್ತು 10ನೇ ತರಗತಿಗಳು
7. ಮುಖ್ಯೋಪಾಧ್ಯಾಯರ ಹೆಸರು ಶ್ರೀ ಬಿ.ಎಂ. ಮಹೇಶ್
8. ಒಟ್ಟು ಶಿಕ್ಷÀಕರು ಮತ್ತು ಒಂಬತ್ತು ಜನ ಶಿಕ್ಷಕರು, ಒಬ್ಬ ಗುಮಾಸ್ತ, ಸಿಬ್ಬಂದಿ ವರ್ಗ ಒಬ್ಬ ಪರಿಚಾಲಕ, ಇಬ್ಬರು ಸಿಪಾಯಿಗಳು ಹಾಗೂ ಒಬ್ಬ ಕಾವಲುಗಾರ.
9. ಪ್ರಸ್ತುತ 2008-09ನೇ ಸಾಲಿನ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 164
10. ಶಾಲಾ ನಿವೇಶನ ಬಾಡಿಗೆ ಕಟ್ಟಡ ಅಯ್ಯರವಾಡಿ, ಆಸಿಫ್ ಗಂಜ್ ಗುಲಬರ್ಗಾ.